Friday 20 January 2012

ಮೂಲಂಗಿ ಕೊಸಂಬರಿ.


ಬೇಕಾಗುವ ಪದಾರ್ಥಗಳು:
೧)ಮೂಲಂಗಿ 
೨)ಹೆಸರು ಬೇಳೆ
೩)ಈರುಳ್ಳಿ 
೪)ಕರಿಬೇವು 
೫)ಉಪ್ಪು 
೬)ಕೊತ್ತಂಬರಿ ಸೊಪ್ಪು 
೮)ಎಣ್ಣೆ 
೯)ನಿಂಬೆ ಹಣ್ಣು 
೧೦)ತೆಂಗಿನ ತುರಿ
11)ಸಾಸಿವೆ 
೧೨)ಹಸಿಮೆಣಸಿನಕಾಯಿ 


ಮಾಡುವ ವಿಧಾನ..:
ಹೆಸರು ಬೇಳೆಯನ್ನು ನೆನೆಸಿ ಇಟ್ಟುಕೊಳ್ಳಿ.
ಮೂಲಂಗಿಯನ್ನು ತುರಿದಿಟ್ಟುಕೊಳ್ಳಿ..ಈರುಳ್ಳಿಯನ್ನು ಸಣ್ಣಗೆ ಹೆಚ್ಹಿ ಇಟ್ಟುಕೊಳ್ಳಿ .ಒಂದು ಪಾತ್ರೆಗೆ ತುರಿದ ಮೂಲಂಗಿ ಹೆಚ್ಚಿದ ಈರುಳ್ಳಿ, ತೆಂಗಿನ ತುರಿ, ನೆನೆಸಿದ ಹೆಸರು ಬೇಳೆಯನ್ನು ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಉಪ್ಪು, ನಿಂಬೆರಸ ಹಾಕಿ . ಒಗ್ಗರಣೆ ಗೆ ಎಣ್ಣೆ ಇಟ್ಟು, ಸಾಸಿವೆ ಕರಿಬೇವು, ಹಸಿಮೆಣಸಿನಕಾಯಿ ಹಾಕಿ ಕಲೆಸಿ, ನಂತರ   ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.. 


ಸಲಹೆ:
ಇದು ಬೊಜ್ಜು ಕರಗಿಸಲು ಹಾಗು ಮೂಲವ್ಯಾದಿಗೆ ತುಂಬಾ ಒಳ್ಳೆಯದು..


No comments:

Post a Comment