Friday 20 January 2012

ಮೂಲಂಗಿ ಕೊಸಂಬರಿ.


ಬೇಕಾಗುವ ಪದಾರ್ಥಗಳು:
೧)ಮೂಲಂಗಿ 
೨)ಹೆಸರು ಬೇಳೆ
೩)ಈರುಳ್ಳಿ 
೪)ಕರಿಬೇವು 
೫)ಉಪ್ಪು 
೬)ಕೊತ್ತಂಬರಿ ಸೊಪ್ಪು 
೮)ಎಣ್ಣೆ 
೯)ನಿಂಬೆ ಹಣ್ಣು 
೧೦)ತೆಂಗಿನ ತುರಿ
11)ಸಾಸಿವೆ 
೧೨)ಹಸಿಮೆಣಸಿನಕಾಯಿ 


ಮಾಡುವ ವಿಧಾನ..:
ಹೆಸರು ಬೇಳೆಯನ್ನು ನೆನೆಸಿ ಇಟ್ಟುಕೊಳ್ಳಿ.
ಮೂಲಂಗಿಯನ್ನು ತುರಿದಿಟ್ಟುಕೊಳ್ಳಿ..ಈರುಳ್ಳಿಯನ್ನು ಸಣ್ಣಗೆ ಹೆಚ್ಹಿ ಇಟ್ಟುಕೊಳ್ಳಿ .ಒಂದು ಪಾತ್ರೆಗೆ ತುರಿದ ಮೂಲಂಗಿ ಹೆಚ್ಚಿದ ಈರುಳ್ಳಿ, ತೆಂಗಿನ ತುರಿ, ನೆನೆಸಿದ ಹೆಸರು ಬೇಳೆಯನ್ನು ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಉಪ್ಪು, ನಿಂಬೆರಸ ಹಾಕಿ . ಒಗ್ಗರಣೆ ಗೆ ಎಣ್ಣೆ ಇಟ್ಟು, ಸಾಸಿವೆ ಕರಿಬೇವು, ಹಸಿಮೆಣಸಿನಕಾಯಿ ಹಾಕಿ ಕಲೆಸಿ, ನಂತರ   ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.. 


ಸಲಹೆ:
ಇದು ಬೊಜ್ಜು ಕರಗಿಸಲು ಹಾಗು ಮೂಲವ್ಯಾದಿಗೆ ತುಂಬಾ ಒಳ್ಳೆಯದು..


Thursday 19 January 2012

ಗಸಗಸೆ ಪಾಯಸ

ಬೇಕಾಗುವ ಪದಾರ್ಥಗಳು
೧)ಗಸಗಸೆ :  ೫೦ಗ್ರಾಮ್ 
೨)ತೆಂಗಿನ ತುರಿ :ಅರ್ಧ ಹೋಳು  
೩)ಬೆಲ್ಲ :೧೦೦ ಗ್ರಾಂ 
 ೪)ಏಲಕ್ಕಿ :1
೫)ಅಕ್ಕಿ :೨ ಚಮಚೆ 
೬)ದ್ರಾಕ್ಷಿ :ಸ್ವಲ್ಪ 
೭)ಗೋಡಂಬಿ :ಸ್ವಲ್ಪ 
೮)ಹಾಲು :ಅರ್ಧ ಲೋಟ 

ಮಾಡುವ ವಿಧಾನ.. 
ಮೊದಲಿಗೆ ಗಸಗಸೆಯನ್ನು ಸ್ವಲ್ಪ ಕೆಂಪಗೆ ಹುರಿದುಕೊಳ್ಳಿ..ತೆಂಗಿನ ತುರಿ ಏಲಕ್ಕಿ ಜೊತೆಗೆ ಅಕ್ಕಿಯನ್ನು ಹಾಕಿ, ಹುರಿದ ಗಸಗಸೆಯ ಜೊತೆಗೆ ನುಣ್ಣಗೆ ರುಬ್ಬಿಕೊಳ್ಳಿ..ಈಗ ಒಂದು ಪಾತ್ರೆಗೆ ರುಬ್ಬಿದ ಮಿಶ್ರಣವನ್ನು ಹಾಕಿ, ಸ್ವಲ್ಪ ನೀರು ಸೇರಿಸಿ ಕುದಿಸಿ..ಒಂದು ಕುದಿ ಬಂದ ನಂತರ  ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ ..ಕೆಳಗೆ ಇಳಿಸಿ, ಹಾಲು ಹಾಕಿ...ದ್ರಾಕ್ಷಿ ಗೋಡಂಬಿಯನ್ನುತುಪ್ಪದಲ್ಲಿ  ಸ್ವಲ್ಪ ಕೆಂಪಗೆ ಹುರಿದು, ಪಾಯಸಕ್ಕೆ ಹಾಕಿ ಬಡಿಸಿ.. !

ಸಲಹೆ:
ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ನಿದ್ರೆ ಚೆನ್ನಾಗಿ ಬರುತ್ತದೆ .ಬಾಯಲ್ಲಿ ಹುಣ್ಣು ಇದ್ದರೆ ಇದರಿಂದ ಗುಣವಾಗುತ್ತದೆ..